ಪ್ರತಿಭಾ ಪುರಸ್ಕಾರ 2025
2024-25 ಸಾಲಿನ ಪ್ರತಿಬಾ ಪುರಸ್ಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್ 20ರಂದು ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ವತಿಯಿಂದ ಆಯೋಜಿಸಲಾಯಿತು. ಬೆಳಗಿನ ಚಹಾದೊಂದಿಗೆ ಆರಂಭವಾದ ಕಾರ್ಯಕ್ರಮವು ಮಧ್ಯಾಹ್ನದ ಊಟದೊಂದಿದೆ ಮುಕ್ತಾಯವಾಯಿತು.
ಕಾರ್ಯಕ್ರಮವು ಟ್ರಸ್ಟಿ ಶ್ರೀಮತಿ ಪದ್ಮಜಾ ಕೊಟ್ಟೂರ್ ಅವರ ಸುಶ್ರಾವ್ಯ ಪ್ರಾರ್ಥನಾ ಗೀತೆಯಿಂದ ಸಾಂಪ್ರದಾಯಿಕ ರೀತಿಯಲ್ಲಿ ಆರಂಭವಾಯಿತು. ಬಳಿಕ ಮುಖ್ಯ ಅತಿಥಿ ಶ್ರೀ ವೈ. ವಿ. ಗುಂಡುರಾವ್, ಟ್ರಸ್ಟ್ ಅಧ್ಯಕ್ಷ ಶ್ರೀ ಗಂಗಾಧರ ವಾಲಿ, ಕಾರ್ಯದರ್ಶಿ ಶ್ರೀ ಪ್ರಕಾಶ್ ರಾಜಗೋಳಿ ಮತ್ತು ಖಜಾಂಚಿ ಶ್ರೀಮತಿ ವೀಣಾ ಕಾರ್ತಿಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಟ್ರಸ್ಟಿ ಶ್ರೀ ಗಿರೀಶ್ ಮೆಟಗುಡ್ಡಮಠ ಅವರು ಸರ್ವರಿಗೂ ಸ್ವಾಗತ ಕೋರಿದರು.
ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟಿನ ಉದ್ದೇಶ, ಗುರಿ, ಮತ್ತು ಟ್ರಸ್ಟ ಆರಂಭದಿಂದ ಇಂದಿನವರೆಗೂ ನಡೆದುಬಂದ ದಾರಿ, ಇಲ್ಲಿನವರಿಗೆ ಪೂರೈಸಿರುವ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗ್ಗೆ ಮತ್ತು ಪ್ರತಿವರ್ಷ ನಡೆಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮಹತ್ವವನ್ನು ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ರಾಜಗೋಳಿಯವರು ಹಂಚಿಕೊಂಡರು.
ಈ ಕಾರ್ಯಕ್ರಮದ ಕೇಂದ್ರ ಆಕರ್ಷಣೆ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನವಾಗಿತ್ತು.
ಮುಖ್ಯ ಅತಿಥಿ ಶ್ರೀ ವೈ. ವಿ. ಗುಂಡುರಾವ್ ಅವರ ಪರಿಚಯವನ್ನು ಶ್ರೀಮತಿ ಜ್ಯೋತಿಲಕ್ಷ್ಮಿ ವೀರಾಪೂರ್ ಮಾಡಿಕೊಟ್ಟರು. ನಂತರ ಅಧ್ಯಕ್ಷ ಶ್ರೀ ಗಂಗಾಧರ ವಾಲಿ ಹಾಗೂ ಕಾರ್ಯದರ್ಶಿ ಶ್ರೀ ಪ್ರಕಾಶ್ ರಾಜಗೋಳಿ ಅತಿಥಿ ಸನ್ಮಾನ ನೆರವೇರಿಸಿದರು.
ಎರಡನೇ ವರ್ಷದ ಪಿ ಯು ಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕುಮಾರಿ ನಾಗಲಕ್ಷ್ಮಿ ವಡೆಯರ್ ಮತ್ತು
8 ನೇ ಸ್ಥಾನ ಪಡೆದ ಕುಮಾರಿ ಎಲ್ಲಮ್ಮ ಅವರ ಪರಿಚಯವನ್ನು ಟ್ರಸ್ಟಿ ಶ್ರೀ ಮಹಾಂತೇಶ್ ವಿರಾಪೂರ್ ಮಂಡಿಸಿದರು.
ಟ್ರಸ್ಟಿನ ವತಿಯಿಂದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಕುಮಾರಿ ನಾಗಲಕ್ಷ್ಮೀ ಹಾಗೂ ಕುಮಾರಿ ಎಲ್ಲಮ್ಮ ಅವರು ಮಾತನಾಡಿ ತಮ್ಮ ಸಾಧನೆಯ ಹಾದಿಯನ್ನು, ಪಟ್ಟ ಶ್ರಮವನ್ನು ತಮ್ಮದೇ ಶೈಲಿಯಲ್ಲಿ ಹೇಳಿ ನೆರೆದ ಪ್ರೇಕ್ಷಕರನ್ನು ಮಂತ್ರ ಮುಗ್ಧ ಗೊಳಿಸಿದ್ದರು.
ಬಳಿಕ ಮುಖ್ಯ ಅತಿಥಿ ಶ್ರೀ ವೈ. ವಿ. ಗುಂಡುರಾವ್ ಪ್ರಶಸ್ತಿಗಳನ್ನು ವಿತರಿಸಿ, ವಿದ್ಯಾರ್ಥಿಗಳಿಗೆ ತಮ್ಮ ಹಾಸ್ಯ ಚಟಾಕಿಗಳ ಮೂಲಕ ಆಶೀರ್ವಚನದ ಮಾತುಗಳಿಂದ ಪ್ರೋತ್ಸಾಹ ನೀಡಿದರು.
ಉತ್ತಮ ಸಾಧನೆಗೆ ವಿದ್ಯಾರ್ಥಿಗಳು ಐದು ಡಿಗ್ರಿ ಪಡೆಯಬೇಕೆಂದು ಹೇಳಿದರು.
BA (ಬಿ ಅಲರ್ಟ್, ಬಿ ಅವೇಕ್ ಬಿ ಅವೆರ್),
BCom (ಬಿ ಕಾಮ್, ಬಿ ಕಮ್ಯುನಿಕೇಟಿವ್)
BCA (ಬಿ ಕ್ರಿಯೇಟಿವ್ ಅಲ್ವೇಸ್ )
BBA (ಬಿ ಬ್ಯುಸಿನೆಸ್ ಅಟ್ಟಿಟ್ಯೂಡ್)
BSc (ಬಿ ಸೋಸಿಯಲ್ಲಿ ಕನ್ಸರ್ನ್ಡ್)
SSLC ಮತ್ತು ದ್ವಿತೀಯ PUC ಯಲ್ಲಿ 2024-25ನೇ ಸಾಲಿನಲ್ಲಿ ಉತ್ತೀರ್ಣರಾದ ನಮ್ಮ ಟ್ರಸ್ಟ್ ಸದಸ್ಯರ ಮಕ್ಕಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
SSLC ವಿದ್ಯಾರ್ಥಿಗಳು: ವರ್ಷಾ ಹೂಟಿ, ಆರ್ಯ ಕಿತ್ತೂರ್, ಸಚಿತ್ ವಿರಾಪುರ್, ಸಾನ್ವಿ ಪೆಟ್ಲೂರ್, ತನ್ವಿ ಆಲೂರ್, ಸೋಹನ್ ಪೊಪ್ಲೆ, ಸ್ಪೂರ್ತಿ ಬಂಗಾರಿಮಠ, ಲೋಹಿತ್ ಕುಬಿಹಾಳಮಠ, ಇಶಾ ಶಂಕರ್ ಯಲಗಚ್, ಧ್ಯೇಯ ಪಾಟೀಲ್ ಮತ್ತು ಸ್ಪೂರ್ತಿ ಬೀಳಗಿ.
PUC ವಿದ್ಯಾರ್ಥಿಗಳು: ಧ್ರುವ ವಾಲಿ, ಅರ್ಪಿತ್ ಉಪ್ಪಿನ್, ಆರ್ನವ್ ಮಿಶ್ರಾ, ಅನಂತ್ ಬಳೂರಗಿ, ಸ್ನೇಹಾ ಅಶೋಕ್ ಮುಗಳಿಹಾಳ.
ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಟ್ರಸ್ಟ್ ಅಧ್ಯಕ್ಷ ಶ್ರೀ ಗಂಗಾಧರ ವಾಲಿ ಅವರು ಪ್ರತಿಭಾ ಪುರಸ್ಕಾರವನ್ನು ಆಯೋಜಿಸುವ ಉದ್ದೇಶವನ್ನು ಪ್ರೇರಣಾದಾಯಕವಾಗಿ ನೀಡಿದರು.
ನಂತರ ಶ್ರೀಮತಿ ಆರತಿ ಆಲೂರ ಅವರು “Reconnecting with Sanskrit” ಎಂಬ ವಿಷಯದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಯಶಸ್ಸಿಗೆ ಅನೇಕರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಶ್ರಮಿಸಿದ್ದಾರೆ. ಸಮೃದ್ಧ ಹಾಗೂ ಸಮರ್ಥ ಮರಡಿ ಅವರ ಸಹಾಯ ಉಲ್ಲೇಖನಾರ್ಹ.
ಕೊನೆಯದಾಗಿ ಖಜಾಂಚಿ ಶ್ರೀಮತಿ ವೀಣಾ ಕಾರ್ತಿಕ್ ಹೃತ್ಪೂರ್ವಕ ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮನೋಜ್ಞವಾಗಿ ಶ್ರೀಮತಿ ಅಶ್ವಿನಿ ವಾಲಿ ಅವರು ನಡೆಸಿಕೊಟ್ಟರು.

ಟ್ರಸ್ಟಿನ ವತಿಯಿಂದ ಎರಡನೇ ವರ್ಷದ ಪಿ ಯು ಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕುಮಾರಿ ನಾಗಲಕ್ಷ್ಮಿ ವಡೆಯರ್ ಮತ್ತು 8 ನೇ ಸ್ಥಾನ ಪಡೆದ ಕುಮಾರಿ ಎಲ್ಲಮ್ಮ ಅವರಿಗೆ ಸನ್ಮಾನ

ಸನ್ಮಾನಿತರು ಮತ್ತು ಮುಖ್ಯ ಅತಿಥಿಗಳ ಜೊತೆಗೆ SSLC & PUC ಯಲ್ಲಿ ಸಾಧನೆ ತೋರಿದ ನಮ್ಮ ಮಕ್ಕಳು
